ಉತ್ತರ ಪ್ರದೇಶ : ಪ್ರೇಮಿಗಳ ನಡುವೆ ವಾಗ್ವಾದ ನಡೆದ ಹಿನ್ನಲೆಯಲ್ಲಿ ಪ್ರಿಯತಮೆಯೊಬ್ಬಳು ತನ್ನ ಪ್ರೇಮಿಯನ್ನು ರುಬ್ಬುವ ಕಲ್ಲು ಬಳಸಿ ಕೊಂದ ಘಟನೆ ಉತ್ತರ ಪ್ರದೇಶದ ಹಮೀರ್ ಪುರ ಜಿಲ್ಲೆಯ ರಾಥ್ ಪ್ರದೇಶದಲ್ಲಿ ನಡೆದಿದೆ. ವೀರೇಂದ್ರ(23) ಮೃತಪಟ್ಟ ಪ್ರೇಮಿ, ವರ್ಷಾ ಅನುರಗಿ ಕೊಲೆ ಮಾಡಿದ ಪ್ರಿಯತಮೆ. ಇವರಿಬ್ಬರು ಸಂಬಂಧ ಹೊಂದಿದ್ದರು. ಮೃತನ ತಾಯಿ ಮತ್ತು ಸಹೋದರ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ಪ್ರೇಮಿಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಆಕೆ ಪ್ರಿಯತಮನನ್ನು