ಮದುವೆಯಾದ ಪ್ರೇಯಸಿಯನ್ನು ಎಳೆದೊಯ್ಯಲು ಯತ್ನಿಸಿ ಜೀವ ಕಳೆದುಕೊಂಡ ಪ್ರಿಯಕರ!

ಲಕ್ನೋ| pavithra| Last Modified ಶನಿವಾರ, 26 ಡಿಸೆಂಬರ್ 2020 (07:46 IST)
ಲಕ್ನೋ : ಬೇರೊಬ್ಬರ ಜೊತೆ ವಿವಾಹವಾದ ತನ್ನ ಪ್ರೇಯಸಿಯನ್ನು ಆಕೆಯ ಗಂಡನ ಮನೆಗೆ ನುಗ್ಗಿ ಕರೆದೊಯ್ಯುವಾಗ ಆಕೆಯ ಅಳಿಯಂದಿರಿಂದ ಹಲ್ಲೆಗೊಳಗಾಗಿ ಪ್ರಿಯಕರ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕ ವಿವಾಹಿತೆಯ ಜೊತೆ ಸಂಬಂಧ ಹೊಂದಿದ್ದಳು, ಆದರೆ ಬೇರೊಬ್ಬರ ಜೊತೆ ವಿವಾಹವಾದ ಹಿನ್ನಲೆಯಲ್ಲಿ ಆಕೆಯ ಗಂಡನ ಮನೆಗೆ ನುಗ್ಗಿ ಆಕೆಯನ್ನು ಎಳೆದೊಯ್ಯಲು ಪ್ರಯತ್ನಿಸಿದ್ದಾನೆ. ಆ ವೇಳೆ ಆಕೆಯ ಪತಿ ಮತ್ತು ಅಳಿಯಂದಿರ ಜೊತೆ  ಜಗಳವಾಗಿದೆ. ಈ ಘಟನೆಯಲ್ಲಿ ಯುವಕನಿಗೆ ತೀವ್ರ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟಿದ್ದಾನೆ. 
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :