ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ಕವಿತ ಮತ್ತು ಬಾಲಕೃಷ್ಣ ಪರಸ್ಪರ ಪ್ರೇಮಿಸುತ್ತಿದ್ದರು. ಆದ್ರೆ ಈ ಪ್ರೀತಿ ಗೊತ್ತಿಲ್ಲದೇ ಕವಿತ ಮನೆಯವರು ಮಗದೊಬ್ಬ ಹುಡುಗನೊಂದಿಗೆ ಮದುವೆಯನ್ನು ನಿಶ್ಚಯಿಸಿದ್ದರು. ಅಪ್ಪ ಅಮ್ಮನ ಮಾತಿಗೆ ವಿರೋಧ ತೋರದ ಕವಿತ ಮದುವೆಗೆ ಸಮ್ಮತಿ ಸೂಚಿಸಿದ್ದಳು. ಇದರಿಂದ ಕೆರಳಿದ ಪ್ರಿಯಕರ ವಿಷ ಉಣಿಸಿದ ಘಟನೆ ವರದಿಯಾಗಿದೆ. ಪ್ರೀತಿಸಿ ಮದುವೆಯಾಗದೆ ಬೇರೊಂದು ಹುಡುಗನ ಜೊತೆಗೆ ಮದುವೆಯಾಗಲು ತಯಾರಾದ ಮಧುವಣಗಿತ್ತಿಗೆ ಪ್ರಿಯಕರನೇ ವಿಷ ಉಣಿಸಿದ ಘಟನೆ ದೇವರಕೊಂಡ ಹಳ್ಳಿಯಲ್ಲಿ ನಡೆದಿದೆ.