ಕುಡಿಯಲು ನೀರು ಕೇಳಿಕೊಂಡು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ದೆಹಲಿಯಲ್ಲಿ ಡೆದಿದೆ. ಆದರೆ ದಿಟ್ಟತನ ಮೆರೆದಿರುವ ಮಹಿಳೆ ಆರೋಪಿಯನ್ನು ಓಡಿಸುವಲ್ಲಿ ಯಶ ಕಂಡಿದ್ದಾರೆ. ಆರತಿ ಎಂಬುವವರು ತಮ್ಮ ಮನೆಯಲ್ಲೇ ಒಬ್ಬರೇ ಇದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಆಕೆಯ ಪತಿ ಸೋಮಶೇಖರ್ ಕೆಲಸಕ್ಕೆ ಹೋಗಿದ್ದು ಮನೆಗೆ ಹಿಂತಿರುಗಿರಲಿಲ್ಲ. ಅಪಾಯದ ವಾಸನೆ ಇಲ್ಲದ ಅವರು ಸಹಜವಾಗಿ ಬಾಗಿಲು ತೆರೆದಿದ್ದಾರೆ. ಹೊರಗೆ ನಿಂತಿದ್ದ ಅಪರಿಚಿತ ವ್ಯಕ್ತಿ