ಮುಂಬೈ : ಮುಂಬೈನ ಅಂದೇರಿ ಪಶ್ಚಿಮ ಭಾಗದಲ್ಲಿಂದು ಮಳಿಗೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮಳಿಗೆಯೊಂದು ಹೊತ್ತಿ ಉರಿದಿದೆ.1,000 ಚದರ ಅಡಿಯ ಅಂಗಡಿ ಇದಾಗಿದ್ದು, ಭಾರೀ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದೆ. ಸ್ಟಾರ್ ಬಜಾರ್ ಸಮೀಪದ ಲಿಂಕ್ ರೋಡ್ ಬಳಿ ಇರುವ ಈ ಶಾಪ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಅದೃಷ್ಠವಶಾತ್ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಗ್ನಿಅವಘಢದ ವಿಡಿಯೋ