10 ರೂಪಾಯಿಗೊಸ್ಕರ ಕೊಲೆಯಾದ ಹಣ್ಣು ಮಾರಾಟಗಾರ!

ಹೈದರಾಬಾದ್| pavithra| Last Modified ಶನಿವಾರ, 9 ಜನವರಿ 2021 (07:18 IST)
ಹೈದರಾಬಾದ್ : ಕೇವಲ 10ರೂ. ಪಾವತಿಸದಿರುವುದಕ್ಕೆ 34 ವರ್ಷದ ಹಣ್ಣು ಮಾರಾಟಗಾರನನ್ನು ಕೊಲೆ ಮಾಡಿದ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ.

ಆರೋಪಿಗಳಿಬ್ಬರು ಹಣ್ಣು ಮಾರಾಟಗಾರನ ಬಳಿ ಹಣ್ಣು ಖರೀದಿಸಿದ ಬಳಿಕ 30ರೂ ವಾಪಾಸು ನೀಡುವಂತೆ ಕೇಳಿದ್ದಾರೆ. ಆದರೆ ಆತ 20ರೂ. ವಾಪಾಸು ನೀಡಿದ್ದಾನೆ.  ಇದರಿಂದ ಅವರ ನಡುವೆ ಜಗಳ ನಡೆದು ಇಬ್ಬರು ಸೇರಿ ಹಣ್ಣು ವ್ಯಾಪಾರಿಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :