ಚಂಡೀಗಢ : ಖಾಲಿಸ್ತಾನ ಪ್ರತ್ಯೇಕವಾದಿಗಳ ಕೂಗು ಹೆಚ್ಚುತ್ತಿದ್ದು, ಇಂದು ಪಂಜಾಬ್ನ ಅಮೃತಸರದಲ್ಲಿರುವ ಸಿಖ್ರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್ನ ಪ್ರವೇಶದ್ವಾರದಲ್ಲಿ ಜನರ ಗುಂಪು ಭಿಂದ್ರನ್ವಾಲೆ ಪರ ಪೋಸ್ಟರ್ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. 38ನೇ ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಪರೇಷನ್ ಬ್ಲೂಸ್ಟಾರ್ ವಾರ್ಷಿಕೋತ್ಸವದ ಮೊದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದರು. ನಂತರ ಶಾಂತಿಯನ್ನು ಕಾಪಾಡಲು