ನಿರ್ಮಾಣ ಹಂತದಲ್ಲಿದ್ದ ನದಿ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಭಾನುವಾರ ಬಿಹಾರದ ಬಾಗಲ್ಪುರ್ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿವೆ. ಬಾಗಲ್ಪುರ್ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಅಂಗುನಿಘಾಟ್- ಸುಲ್ತಾನ್ಗಂಜ್ ಜೋಡಿ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆ ಬಾಗಲ್ಪುರ್ – ಖಾಗಾರಿಯಾ ಜಿಲ್ಲೆಗಳನ್ನು ಕೂಡಿಸುತ್ತದೆ. ಈ ಸೇತುವೆ ಎರಡನೇ ಬಾರಿ ಕುಸಿದಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರಿ ಗಾಳಿ ಮಳೆಗೆ ಭಾಗಶಃ ಕುಸಿದಿತ್ತು.