ಲಕ್ನೋ : ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಯುವಕರ ಚೇಷ್ಟೆಯಿಂದ ಬೇಸತ್ತ ಇಂಟರ್ ಮೀಡಿಯೇಟ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ವಿದ್ಯಾರ್ಥಿನಿಯ ಶವದ ಬಳಿ ಎರಡು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಬಾಲಕಿ ಯುವಕನ ಹೆಸರನ್ನೂ ಬಹಿರಂಗಪಡಿಸಿದ್ದಾಳೆ. ಯುವಕನ ಚೇಷ್ಟೆ ಹಾಗೂ ಬ್ಲಾಕ್ಮೇಲಿಂಗ್ನಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈ ಪ್ರಕರಣದಲ್ಲಿ ಆತ್ಮಹತ್ಯೆ ಪತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಬಂದಾ ಜಿಲ್ಲೆಯ ದೇಹತ್ ಕೊಟ್ವಾಲಿ ವ್ಯಾಪ್ತಿಯ