ಮುಂಬೈ : ಒಂದೂವರೆ ವರ್ಷದ ಅಂಬೆಗಾಲಿಡುವ ಮಗುವನ್ನು ಕುದಿಯುವ ನೀರಿದ್ದ ಬಕೆಟ್ನಲ್ಲಿ ಮುಳುಗಿಸಿ ಕೊಂದ ಆರೋಪಿಯನ್ನು ಪುಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಯನ್ನು ವಿಕ್ರಮ್ ಕೋಲೇಕಾರ್ ಎಂದು ಗುರುತಿಸಲಾಗಿದೆ. ಈತ ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕಿರಣ ಎಂಬಾಕೆ ಮೃತ ಮಗುವಿನ ತಾಯಿ. ವಿಕ್ರಮ್, ಕಿರಣಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ತನ್ನನ್ನು ನಿರಾಕರಿಸಿದ ಕೋಪಕ್ಕೆ ಆಕೆಯ ಮಗುವನ್ನು ಕೊಂದಿದ್ದಾನೆ ಎಂದು