ಸ್ಪಾ ಹೆಸರಲ್ಲಿ ಮಾಂಸ ದಂಧೆ ನಡೆಸುತ್ತಿರುವುದು ಪೊಲೀಸ್ ಮಾಹಿತಿ ಮೇರೆಗೆ ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಟಾಸ್ಕ್ ಫೋರ್ಸ್ ಪೊಲೀಸ್ ತಂಡ ಸ್ಪಾ ಮೇಲೆ ದಾಳಿ ಮಾಡಿ 6 ಮಂದಿಯನ್ನು ಬಂಧಿಸಿದೆ. ಆರೋಪಿಗಳೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಮಹಿಳೆಯರು ಕಲ್ಕತ್ತಾ, ಬೆಂಗಳೂರು, ಆಂಧ್ರದವರೆಂದು ತಿಳಿದುಬಂದಿದೆ. ಮಸಾಜ್ ಮಾಡ್ತೀವಿ.. ಒಳ್ಳೆ ಸರ್ವಿಸ್ ಕೊಡಿಸ್ತೀವಿ.. ವಿವಿಧ ಆಫರ್ಸ್ ನೀಡ್ತೀವಿ ಅಂತಾ ಸ್ಪಾ ಶುರುವಾಗಿತ್ತು. ದಿನದಿಂದ ದಿನಕ್ಕೆ ಕಸ್ಟಮರ್ಸ್ ಸಂಖ್ಯೆ ಜಾಸ್ತಿಯಾಗಿತ್ತು.