ರಾಜ್ ಕೋಟ್ : ಮಹಿಳೆಯೊಬ್ಬಳು ಪತಿಯ ಮೊದಲ ಪತ್ನಿಯ 11 ವರ್ಷದ ಮಗನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ಘಟನೆ ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ವಿವಾಹವಾದ ಬಳಿಕ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದಕಾರಣ ಮೊದಲನೆ ಪತ್ನಿಯ ಮಗನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ. ಬಾಲಕನನ್ನು ಕಾಲುವೆಯ ಬಳಿ ಸ್ನಾನಕ್ಕೆಂದು ಕರೆದು ಆತನನ್ನು ಕಾಲುವೆಗೆ ತಳ್ಳಿದ್ದಾಳೆ.ಬಾಲಕನ ಶವ ಪತ್ತೆಯಾದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಢಿದ್ದಾರೆ.