Widgets Magazine

ಸೇಲ್ಸ್ ಮ್ಯಾನ್ ಜೊತೆ ಅನೈತಿಕ ಸಂಬಂಧಕ್ಕಾಗಿ ಪತಿಯನ್ನೇ ಕೊಂದ ಪತ್ನಿ

ಲಕ್ನೋ| pavithra| Last Updated: ಬುಧವಾರ, 20 ನವೆಂಬರ್ 2019 (06:30 IST)
ಲಕ್ನೋ : ಸೇಲ್ಸ್ ಮ್ಯಾನ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ನಾಲ್ಕು ಮಕ್ಕಳ ತಾಯಿ ತನ್ನ ಪತಿಯನ್ನೇ ಕೊಂದ ಘಟನೆ ಉತ್ತರ ಪ್ರದೇಶದ ಸಿಕ್ಕಂದರಾದಲ್ಲಿನ ರಾಧಾ ನಗರದಲ್ಲಿ ನಡೆದಿದೆ.
ಹರಿ ಓಂ(36)ಕೊಲೆಯಾದ ಪತಿ, ಬಬ್ಲಿ ಕೊಲೆ ಮಾಡಿದ ಪತ್ನಿ, 17 ವರ್ಷಗಳ ಹಿಂದೆ ಮದುವೆಯಾದ ಇವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಆದರೆ ಬಬ್ಲಿಗೆ ಸೇಲ್ಸ್ ಮ್ಯಾನ್ ಕರಣ್ ಎಂಬಾತನ ಪರಿಚಯವಾಗಿದ್ದು, ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ಪತಿ ಹರಿ ಈ ಸಂಬಂಧವನ್ನು ವಿರೋಧಿಸಿದ್ದಕ್ಕೆ ಇಬ್ಬರು ಸೇರಿ ಆತನನ್ನು ಕೊಂದು ಅವನ ದೇಹವನ್ನು ನದಿಗೆ ಎಸೆದಿದ್ದಾರೆ.


ಮಗ ಕಾಣೆಯಾಗಿರುವ ಹಿನ್ನಲೆಯಲ್ಲಿ ಹರಿ ಓಂ ತಂದೆ ಸಿಕಂದರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಪತ್ನಿಯನ್ನು ವಿಚಾರಿಸಿದಾಗ ಆಕೆ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ.

ಇದರಲ್ಲಿ ಇನ್ನಷ್ಟು ಓದಿ :