ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಗೆಳೆಯನಿಗೆ ಸಹಕರಿಸಿದ ಮಹಿಳೆ

ಚೆನ್ನೈ| pavithra| Last Modified ಶನಿವಾರ, 2 ಜನವರಿ 2021 (07:45 IST)
ಚೆನ್ನೈ : ಚೆನ್ನೈನಲ್ಲಿ 36 ವರ್ಷದ ಮಹಿಳೆ ತನ್ನ 32 ವರ್ಷದ ಗೆಳೆಯನಿಗೆ 15 ವರ್ಷದ ಮಗಳ  ಮೇಲೆ ಮಾನಭಂಗ ಎಸಗಲು ಅವಕಾಶ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.

ಮಹಿಳೆ ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟಿದ್ದಳು. ತನ್ನ ಮಗಳ ಜೊತೆ ವಾಸವಾಗಿದ್ದ ಮಹಿಳೆ ಗೆಳೆಯನ ಜೊತೆ ಸಂಬಂಧದಲ್ಲಿದ್ದಳು. ಮಹಿಳೆಯ ಮನೆಗೆ ಆಗಾಗ ಬರುತ್ತಿದ್ದ ಗೆಳೆಯ ಆಕೆಯ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಶುರುಮಾಡಿದ್ದಾನೆ. ಇದಕ್ಕೆ ಮಹಿಳೆಯು ಒಪ್ಪಿಗೆ ನೀಡಿದ್ದಳು.

ಚಿಕ್ಕಪ್ಪನ ಮನೆಗೆ ತೆರಳಿದ್ದ ಹುಡುಗಿ ಗರ್ಭಿಣಿಯಾಗಿರುವುದು ತಿಳಿದ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಾಖಲಿಸಿಕೊಂಡ ಪೊಲೀಸರು ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :