ಲಕ್ನೋ : ಯುವಕನೊಬ್ಬ 9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದ ಪಿನ್ನಾ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಕುಮಾರ್ (20) ಕಿರುಕುಳ ಕೊಟ್ಟಿರುವ ಆರೋಪಿಯಾಗಿದ್ದು, ಈತ ಬಾಲಕನನ್ನು ಗದ್ದೆಗೆ ಕರೆದೊಯ್ದು ಆತನಿಗೆ ಲೈಂಗಿಕ ಕಿರುಕುಳ ನೀಡಿ, ಈ ವಿಷಯವನ್ನು ಯಾರ ಬಳಿಯು ಹೇಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದಾನೆ. ಆದರೆ ಈ ವಿಚಾರವನ್ನು ತನ್ನ ತಂದೆಯ ಬಳಿ ತಿಳಿಸಿದ ಕಾರಣ ತಂದೆ