ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಗೋವಾ ಮತ್ತು ಪಂಜಾಬ್ನಲ್ಲಿ ಅಧಿಕಾರ ವಿಸ್ತರಿಸುವ ಮಹಾದಾಸೆ ಹೊತ್ತಿರುವ ಆಪ್ ಅಬ್ಬರದ ಪ್ರಚಾರವನ್ನು ಮುಂದುವರೆಸಿದೆ. ಭಾನುವಾರ ಗೋವಾದ ಶಿರೋಡಾದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಆಪ್ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಗೋವಾದಲ್ಲಿ ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ನಾವು ಅಧಿಕಾರ ಹಿಡಿದರೆ ಅದಕ್ಕೆ ಇತಿಶ್ರೀ ಹಾಡುತ್ತೇವೆ. ಗೋವಾದಲ್ಲಿ ಕಾಂಗ್ರೆಸ್