ತಮಿಳುನಾಡು : ಮದುವೆಯಾಗಲು ನಿರಾಕರಿಸಿದ ವಿಧವೆಯ ಮೇಲೆ ಯುವಕನೊಬ್ಬ ಆಸಿಡ್ ಎರಚಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಹೆಸರು ಜಾನ್(28) ಎಂದು ಗುರುತಿಸಲಾಗಿದ್ದು, ಗಿರಿಜಾ (35) ಆಸಿಡ್ ದಾಳಿಗೆ ಒಳಗಾದ ವಿಧವಾ ಮಹಿಳೆ. ಒಂಬತ್ತು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಈಕೆ ತನ್ನ ಇಬ್ಬರು ಮಕ್ಕಳೊಂದಿಗೆ ತಿರುವತ್ತರ್ ಬಳಿ ವಾಸಿಸುತ್ತಿದ್ದಳು. ಈಕೆಗೆ ನೆರೆಮನೆಯಲ್ಲಿ ವಾಸಿಸುತ್ತಿದ್ದ ಜಾನ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ