ಪ್ರಧಾನಿ ಮೋದಿ ವಿರುದ್ಧ ನಟಿ ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ?

ನವದೆಹಲಿ| Krishnaveni K| Last Modified ಸೋಮವಾರ, 21 ಅಕ್ಟೋಬರ್ 2019 (09:28 IST)
ನವದೆಹಲಿ: ಮೊನ್ನೆಯಷ್ಟೇ ದೆಹಲಿಯಲ್ಲಿ ಮಹಾತ್ಮಾ ಗಾಂಧೀಜಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಾಲಿವುಡ್ ನಟರ ಜತೆಗೆ ಬೆರೆತಿದ್ದು ಎಲ್ಲೆಡೆ ಫೋಟೋ ಹರಿದಾಡುತ್ತಿತ್ತು. ಆದರೆ ಈ ಕಾರ್ಯಕ್ರಮದ ಬಗ್ಗೆ ದ.ಭಾರತದ ಖ್ಯಾತ ನಟಿ ಖುಷ್ಬೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 
ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ಗಳೆಲ್ಲಾ ಆಗಮಿಸಿದ್ದರು. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಜತೆಗೆ ಸೆಲ್ಫೀ ತೆಗೆಸಿಕೊಂಡು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲೂ ಪ್ರಕಟಿಸಿದ್ದರು.
 
ಆದರೆ ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನು ಆಹ್ವಾನಿಸದೇ ಇದ್ದಿದ್ದು ಯಾಕೆ ಎಂದು ನಟಿ ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಳೆದ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸಿ ಹಲವು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಆದರೆ ಪ್ರಧಾನಿ ಮೋದಿಜೀ, ಭಾರತೀಯ ಸಿನಿಮಾ ಎಂದರೆ ಕೇವಲ ಹಿಂದಿ ಸಿನಿಮಾ ಅಲ್ಲ. ಭಾರತೀಯ ಸಿನಿಮಾಗೆ ದ.ಭಾರತದ ಸಿನಿಮಾಗಳದ್ದೂ ಗಮನಾರ್ಹ ಕೊಡುಗೆ ಇದೆ’ ಎಂದು ಖುಷ್ಬೂ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :