ಮಹಿಳೆ ಪ್ರಸವದ ಸಮಯದಲ್ಲಿ ಸಹಿಸಲಾಗದ ನೋವಿನಿಂದಾಗಿ ಅಸುನೀಗಿದ್ದಳು. ವರದಿಗಳ ಪ್ರಕಾರ ಆಕೆಯನ್ನು ಸಮಾಧಿ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಶವವನ್ನು ಮೇಲಕೆತ್ತಿದ ದುರುಳರು ರಾತ್ರಿ ಸಮಯದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಕಾಮುಕತೆ ಪೈಶಾಚಿಕ ರೂಪ ತಾಳಿ ಹೇಗೆ ಮೆರೆದಾಡುತ್ತಿದೆ ಎನ್ನುವುದಕ್ಕೆ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಅಮಾನುಷ ಘಟನೆಗಳೇ ಸಾಕ್ಷಿಯಾಗುತ್ತಿವೆ. ಹಸುಳೆಯರ ಮೇಲೆ ಗ್ಯಾಂಗ್ ರೇಪ್ ಎಸೆದ ಘಟನೆಗಳು