ನವದೆಹಲಿ : ಕೃತಕ ಬುದ್ಧಿಮತ್ತೆ ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ `ಡ್ರೋನ್ಗಳ ಸಮೂಹ’ ವನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತಿದೆ.ನಿರ್ದಿಷ್ಟ ಗುರಿಯನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಮೂಲಗಳು ಹೇಳಿವೆ. ಹೆಸರೇ ಹೇಳುವಂತೆ `ಡ್ರೋನ್ಗಳ ಸಮೂಹ’ವು ನಿರ್ದಿಷ್ಟ ಸಂಖ್ಯೆಯ ಡ್ರೋನ್ಗಳನ್ನು ಒಳಗೊಂಡಿರುತ್ತದೆ. ಈ `ಡ್ರೋನ್ ಸಮೂಹ’ವನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ.