ಏರ್ ಇಂಡಿಯಾದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಈಚೆಗಷ್ಟೇ ಯಶಸ್ವಿಯಾಗಿ ಮುಗಿದಿದೆ. ಇದೇ ವೇಳೆ ಸರ್ಕಾರ ಕೂಡ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ)ಗೆ ವರ್ಗಾವಣೆಯಾದ ಸಾಲವನ್ನು ಚುಕ್ತಾ ಮಾಡಲು ನಿರ್ಧರಿಸಿದೆ. ಸರ್ಕಾರವು ಏರ್ ಇಂಡಿಯಾದ ಬಾಕಿ ಖಾತ್ರಿ ಸಾಲಗಳು ಮತ್ತು ಇತರ ಸಣ್ಣ-ಪುಟ್ಟ ಸಾಲಗಳನ್ನು ತೀರಿಸುವ ಸಲುವಾಗಿ ಹೆಚ್ಚುವರಿಯಾಗಿ 51,971 ಕೋಟಿ ರೂಪಾಯಿಗಳನ್ನು ಕೇಂದ್ರ ಬಜೆಟ್ 2022-23ರಲ್ಲಿ ಮೀಸಲಿರಿಸಿದೆ.ಈ ಮೊತ್ತವು 2021-22ನೇ ಸಾಲಿನ ಪರಿಷ್ಕೃತ ಅಂದಾಜಿನ ಒಟ್ಟಾರೆ ವೆಚ್ಚದಲ್ಲಿ ಬರುತ್ತದೆ.