ನಮೋ ಜಾಕೆಟ್ ನಂತ್ರ ಐ ಲವ್ ಮೋದಿ ಪೆನ್‌ಗಳು ಮಾರುಕಟ್ಟೆಗೆ ಲಗ್ಗೆ

ಅಹ್ಮದಾಬಾದ್, ಗುರುವಾರ, 31 ಮಾರ್ಚ್ 2016 (19:02 IST)

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಮೋ ಜಾಕೆಟ್ ಮಾರುಕಟ್ಟೆಯಲ್ಲಿ ಕೋಲಾಹಲವೆಬ್ಬಿಸಿ ಜನಪ್ರಿಯತೆ ಪಡೆದ ನಂತರ ಇದೀಗ ಐ ಲವ್ ಯೂ ಮೋದಿ ಎನ್ನುವ ಪೆನ್‌ಗಳು ಗುಜರಾತ್ ಮಾರುಕಟ್ಟೆಗೆ ಅಪ್ಪಳಿಸಿವೆ.
ಗುಜರಾತ್‌ನಲ್ಲಿ 10ನೇ ಮತ್ತು 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಐ ಲವ್ ಮೋದಿ ಎನ್ನುವ ನಮೋ ಪೆನ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಐ ಲವ್ ಮೋದಿ ಎನ್ನುವ ಪೆನ್‌ಗಳನ್ನು ಕೇಸರಿ ಬಣ್ಣದ ಕವರ್‌ನಲ್ಲಿ ಪ್ಯಾಕ್ ಮಾಡಲಾಗಿದ್ದು, ಪೆನ್‌ ಮೇಲೆ ನರೇಂದ್ರ ಮೋದಿ ಭಾವಚಿತ್ರ ಮತ್ತು ಬಿಜೆಪಿಯ ಕಮಲದ ಚಿಹ್ನೆಯನ್ನು ಮುದ್ರಿಸಲಾಗಿದೆ. 
 
ಐ ಲವ್ ಮೋದಿ ಎನ್ನುವ ಪೆನ್‌ಗಳನ್ನು ಖಾಸಗಿ ಸಂಸ್ಥೆಯೊಂದು 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುವ ಮುಂಚೆಯೇ ಉಡುಗೊರೆಯಾಗಿ ನೀಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೋಲ್ಕತಾ ಫ್ಲೈಓವರ್ ಕುಸಿತ: ಕನಿಷ್ಠ 17 ಸಾವು, ಮೋದಿ ಸಂತಾಪ

ಕೋಲ್ಕತಾ: ದುರದೃಷ್ಟಕರ ಘಟನೆಯೊಂದರಲ್ಲಿ ಫ್ಲೈಓವರ್ ಕುಸಿತಗೊಂಡಿದ್ದರಿಂದ ಕನಿಷ್ಠ 17 ಜನರು ...

news

ಹಣ ಲೂಟಿಗಾಗಿ ನಡೆಯುತ್ತಿದೆ ಪ್ರಶ್ನೆ ಪತ್ರಿಕೆ ಸೋರಿಕೆ: ಪೋಷಕರ ಆರೋಪ

ಬೆಂಗಳೂರು: ಹಣವನ್ನು ಲೂಟಿ ಹೊಡೆಯಲು ಪ್ರಶ್ನೆಪತ್ರಿಕೆ ಸೋರಿಕೆ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ...

news

ರೈತರ ಬೆಳೆ ನಷ್ಟಕ್ಕೆ ಕಡಿಮೆ ಪರಿಹಾರ ಆತ್ಮಹತ್ಯೆಗೆ ಪ್ರಚೋದನೆ: ಸುಪ್ರೀಂಕೋರ್ಟ್

ನವದೆಹಲಿ: ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಕಡಿಮೆ ಪರಿಹಾರ ಕೊಡುತ್ತಿರುವುದು ಕೆಲವರು ...

news

ವೆಬ್‌ದುನಿಯಾ ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ಸ್ ಡೌನ್‌ಲೋಡ್ ಮಾಡಿ

ವೆಬ್‌ದುನಿಯಾ ತಾಜಾ ಕನ್ನಡ ಸುದ್ದಿಗಳನ್ನು ಓದಲು ಪೋರ್ಟಲ್‌ಗೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ...