ಬೆಂಗಳೂರಿನಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. ಅವೆನ್ಯೂ ರಸ್ತೆಯಲ್ಲಿರುವ ಗೋದಾಮುಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅದು ಅಕ್ಕಪಕ್ಕದ ಅಂಗಡಿಗಳು ಮತ್ತು ಐದಾರು ಮನೆಗಳಿಗೂ ಹರಡಿದೆ. ಮುಂಜಾನೆ 5.30 ರಿಂದ 6 ಗಂಟೆ ಸುಮಾರಿಗೆ ದರ್ಗಾ ಮೈದಾನದ ಹೊರಭಾಗದಲ್ಲಿರುವ ಪೆಟ್ಟಿಗೆ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದ್ದು ಹೊತ್ತಿ ಉರಿದ ಪೆಟ್ಟಿಗೆ ಕಾರ್ಖಾನೆ ಬೆಂಕಿ ಸುತ್ತಮುತ್ತಲು ಕೂಡ