ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ ಅಹ್ಮದ್ ಪಟೇಲ್

ನವದೆಹಲಿ| pavithra| Last Modified ಗುರುವಾರ, 26 ಸೆಪ್ಟಂಬರ್ 2019 (11:55 IST)
ನವದೆಹಲಿ : ದೆಹಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ  ಅಹ್ಮದ್ ಪಟೇಲ್ ಭೇಟಿ ಮಾಡಿದ್ದಾರೆ.ಇಂದು ತಿಹಾರ್ ಜೈಲಿಗೆ ಭೇಟಿ ನೀಡಿದ್ದ ಅಹ್ಮದ್ ಪಟೇಲ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಮುಂದಿನ ಕಾನೂನು ಹೋರಾಟದಲ್ಲಿ ಪಕ್ಷ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

 

ಈ ವೇಳೆ ಅವರ ಜತೆ ಮಾಜಿ ಸಚಿವ, ರಾಜ್ಯಸಭಾ ಸಂಸದ ಆನಂದ್ ಶರ್ಮಾ, ಸಹೋದರ ಡಿಕೆ ಸುರೇಶ್ ಕೂಡಾ ಹಾಜರಿದ್ದರು.

 
ಇದರಲ್ಲಿ ಇನ್ನಷ್ಟು ಓದಿ :