ನಿನ್ನೆ ದಿನಪೂರ್ತಿ ನಡೆದ ಗುಜರಾತ್ ರಾಜ್ಯಸಭೆ ಚುನಾವಣೆಯ ಮೇಲಾಟಗಳ ಬಳಿಕ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಗೆಲುವು ಸಾಧಿಸಿದ್ದಾರೆ. 44 ಮತಗಳನ್ನ ಪಡೆದ ಅಹ್ಮದ್ ಪಟೇಲ್ ಪ್ರತಿಸ್ಪರ್ಧಿ ಬಿಜೆಪಿಯ ಬಲವಂತಸಿಂಗ್ ರಜಪೂತ್ ಅವರನ್ನ ಮಣಿಸಿದ್ದಾರೆ. ನಿರೀಕ್ಷೆಯಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಯ ಗಳಿಸಿದ್ದಾರೆ.