ನವದೆಹಲಿ : ಟ್ರಕ್ಗಳಲ್ಲಿ ಹವಾನಿಯಂತ್ರಿತ ಡ್ರೈವರ್ ಕ್ಯಾಬಿನ್ಗಳನ್ನು ಕಡ್ಡಾಯಗೊಳಿಸುವ ಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು. ವಾಹನ ತಯಾರಕರು ಹವಾನಿಯಂತ್ರಿತ ಡ್ರೈವರ್ ಕ್ಯಾಬಿನ್ಗಳನ್ನು ಅಳವಡಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಆಟೋ ಉದ್ಯಮದ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವರು, ಟ್ರಕ್ ಡ್ರೈವರ್ ಕಂಪಾರ್ಟ್ಮೆಂಟ್ಗಳಲ್ಲಿ ಹವಾನಿಯಂತ್ರಿತ (ಎಸಿ) ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ನಮ್ಮ ಚಾಲಕರು 43-47% ರಷ್ಟು ಕಠಿಣ ತಾಪಮಾನದಲ್ಲಿ ವಾಹನಗಳನ್ನು