ಭೋಪಾಲ್ : ಮಧ್ಯಪ್ರದೇಶದಲ್ಲಿ ತಾಲೀಮು ನಡೆಸುತ್ತಿದ್ದ ವೇಳೆ ಪತನಗೊಂಡಿದ್ದ ಸುಖೋಯ್-30 ಹಾಗೂ ಮಿರಾಜ್-2000 ಭಾರತೀಯ ಯುದ್ಧ ವಿಮಾನಗಳ ಬ್ಲ್ಯಾಕ್ಬಾಕ್ಸ್ (ಡೇಟಾ ರೆಕಾರ್ಡರ್) ಭಾನುವಾರ ಪತ್ತೆಯಾಗಿದೆ. ಸುಖೋಯ್-30 ಹಾಗೂ ಮಿರಾಜ್-2000 ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ಟೇಕಾಫ್ ಆಗಿ ತಾಲೀಮು ನಡೆಸುತ್ತಿದ್ದವು.ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿದ್ದವು. ಪರಿಣಾಮ ಮಿರಾಜ್-2000 ಯುದ್ಧ ವಿಮಾನದಲ್ಲಿದ್ದ ಪೈಲಟ್ ಮೃತಪಟ್ಟಿದ್ದರು. ಘಟನೆ