ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ಪ್ರಯಾಣಿಕರನ್ನು ಆಕರ್ಷಿಸಲು ಸಾವನ್ ಎಕ್ಸ್ಪ್ರೆಸ್ ಮುಂಗಾರು ರಿಯಾಯಿತಿ ಯೋಜನೆ ಘೋಷಿಸಿದೆ. ಕನಿಷ್ಠ ವಿಮಾನ ಪ್ರಯಾಣ ದರಗಳು 706ರಿಂದ ಆರಂಭವಾಗುತ್ತಿವೆ. ಆಯ್ದ ಕೆಲವು ದೇಶಿಯ ಮಾರ್ಗಗಳಿಗೆ ಇದು ಅನ್ವಯವಾಗುತ್ತದೆ. ಟಿಕೆಟ್ ಮಾರಾಟ ಜೂನ್ 21ರ ವರೆಗೆ ಇದ್ದು, ಜುಲೈ 1ರಿಂದ ಸೆಪ್ಟೆಂಬರ್ 20ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದು. ಇತರ ವಿಮಾನಯಾನ ಕಂಪೆನಿಗಳು ಈಗಾಗಲೇ ದರ ಇಳಿಕೆ ಮಾಡಿರುವುದರಿಂದ