Widgets Magazine

ಅಖಿಲೇಶ್ ಯಾದವ್ ಖಡ್ಗವಿಹೀನ ಟಿಪ್ಪು ಸುಲ್ತಾನ್: ಬಿಜೆಪಿ ನಾಯಕ

ಲಕ್ನೋ| Jaya| Last Updated: ಗುರುವಾರ, 25 ಫೆಬ್ರವರಿ 2016 (19:54 IST)
ಸ್ವಾಮಿ ಪ್ರಸಾದ್ ಮೌರ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು 'ಟಿಪ್ಪು ಸುಲ್ತಾನ್' ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ ಅಖಿಲೇಶ್ ಜನರನ್ನು ಅದರಲ್ಲೂ ವಿಶೇಷವಾಗಿ ಯುವಜನಾಂಗವನ್ನು ವಂಚಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

2016-17 ನೇ ಸಾಲಿನ ಬಜೆಟ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಮಾತನಾಡುತ್ತಿದ್ದ ಮೌರ್ಯ ಟಿಪ್ಪು (ಮುಖ್ಯಮಂತ್ರಿ ಉಪನಾಮ) ಸುಲ್ತಾನನೆನೋ ಆದರು. ಆದರೆ ಖಡ್ಗ ರಾಮ್ಪುರದವರ (ಸಂಸದೀಯ ವ್ಯವಹಾರಗಳ ಸಚಿವ
ಆಜಂ ಖಾನ್) ಕೈಗೆ ಹೋಯಿತು ಎಂದು ಕುಹಕವಾಡಿದ್ದಾರೆ.

ಚುನಾವಣೆ ಸಮಯದಲ್ಲಿ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಲಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಸರ್ಕಾರ
ಮರೆತಿದೆ ಎಂದು ಅವರು ಆರೋಪಿಸಿದ್ದಾರೆ.

ನಿರುದ್ಯೋಗ ಭತ್ಯೆ ವಾಗ್ದಾನವನ್ನು ಕಸದ ಬುಟ್ಟಿಗೆ ಎಸೆಯಲಾಯಿತು. ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಮತ್ತು ಬಡ ಮಹಿಳೆಯರಿಗೆ ಎರಡು ಸೀರೆಗಳನ್ನು ನೀಡುವ ವಾಗ್ದಾನವನ್ನು ಸಹ ಮರೆಯಲಾಗಿದೆ ಎಂದು ಮೌರ್ಯ ಕಿಡಿಕಾರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :