ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆಗೆ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ಮೋದಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟಾಂಗ್ ನೀಡಿದ್ದಾರೆ.ಪ್ರಧಾನಿಗಳ ಮೊದಲ ಸುದ್ದಿಗೋಷ್ಠಿ ನೋಡಿದ್ದೀರಾ? ಬಹುಶಃ ಇದು ಕೊನೆಯ ಮನ್ ಕೀ ಬಾತ್. ಆದ್ರೆ ರೇಡಿಯೋ ಬದಲಾಗಿ ಟಿವಿಯಲ್ಲಿ ಪ್ರಸಾರವಾಯಿತು ಅಷ್ಟೇ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳುವ ಅವಕಾಶವೇ ಇರಲಿಲ್ಲ. ಸೈಲೆಂಟ್ ಸೈನಿಕರಂತೆ ಬಾಯಿ ಮುಚ್ಚಿಕೊಂಡು ಕೂತಿದ್ದರು ಎಂದು ಅಖಿಲೇಶ್ ಯಾದವ್ ವ್ಯಂಗ್ಯ