ಬಿಜೆಪಿಯ ಎಲ್ಲಾ ಮುಖಂಡರು ಕಳ್ಳರು - ರಾಹುಲ್ ಗಾಂಧಿ ಟ್ವೀಟ್

ನವದೆಹಲಿ, ಶನಿವಾರ, 23 ಮಾರ್ಚ್ 2019 (12:20 IST)

ನವದೆಹಲಿ : ಅವರ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಎಲ್ಲಾ ಮುಖಂಡರು ಕಳ್ಳರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.


ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ಕೇಂದ್ರ ನಾಯಕರಿಗೆ 1,800 ಕೋಟಿ ರೂ. ಹಣ ವರ್ಗಾವಣೆ ಮಾಡಿದ ವಿಚಾರದ ಬಗ್ಗೆ ಇರುವ ಡೈರಿಯೊಂದನ್ನು ಬಿಡುಗಡೆ ಮಾಡಿದ್ದರು. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ 1 ಸಾವಿರ ಕೋಟಿ, ಅರುಣ್ ಜೇಟ್ಲಿ ಮತ್ತು ಗಡ್ಕರಿ ಅವರಿಗೆ 150 ಕೋಟಿ, ರಾಜನಾಥ್ ಸಿಂಗ್ ಅವರಿಗೆ 100 ಕೋಟಿ, ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ 50 ಕೋಟಿ ರೂ., ನಿತಿನ್ ಗಡ್ಕರಿ ಮಗಳ ಮದುವೆಗೆ 10 ಕೋಟಿ, ತನ್ನ ವಿರುದ್ಧದ ಕೇಸ್‍ಗಳ ವಕಾಲತ್ತಿಗೆ 50 ಕೋಟಿ ರೂ. ಹಣವನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.


ಈ ಡೈರಿ ವಿಚಾರದ ಬಗ್ಗೆ ಟ್ವಿಟರ್​​ನಲ್ಲಿ ಆಕ್ರೋಶ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಬಿಜೆಪಿ ಮುಖಂಡರೆಲ್ಲರೂ ಕಳ್ಳರು. ಪ್ರಧಾನಿ ಮೋದಿ, ಪಾರ್ಟಿ ಅಧ್ಯಕ್ಷ ಅಮಿತ್​ ಶಾ ಹಾಗೂ ಗೃಹ ಸಚಿವ ರಾಜನಾಥ್​ ಸಿಂಗ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಯತ್ತ ಮುಖ ಮಾಡಿದ ಮತ್ತೊಬ್ಬ ಕಾಂಗ್ರೆಸ್ ನಾಯಕ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಪ್ಪಳದ ...

news

ಇನ್ನು ಆರು ತಿಂಗಳಗಳ ಕಾಲ ಓಲಾ ಟ್ಯಾಕ್ಸಿ ಸೇವೆ ಸ್ಥಗಿತ. ಕಾರಣವೇನು ಗೊತ್ತಾ?

ಬೆಂಗಳೂರು : ಸಾರಿಗೆ ಇಲಾಖೆಗಳು ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ್ದರಿಂದ ಓಲಾ ಟ್ಯಾಕ್ಸಿ ಸೇವೆಗೆ ...

news

ಇಂದು ಸಂಜೆ ಸಚಿವ ಸಿ.ಎಸ್. ಶಿವಳ್ಳಿ ಅಂತ್ಯಕ್ರಿಯೆ

ಹುಬ್ಬಳ್ಳಿ : ಹೃದಯಾಘಾತದಿಂದ ನಿನ್ನೆ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅಂತ್ಯಕ್ರಿಯೆ ಇಂದು ...

news

ಡೈರಿಯಲ್ಲಿರುವ ಸಹಿ ಯಡಿಯೂರಪ್ಪನವರದ್ದು ಅಲ್ಲ - ಆಪ್ತರಿಂದ ದಾಖಲೆ ಬಿಡುಗಡೆ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣಕ್ಕೆ ...