ಮುಂಬೈ: ಇಂದು ಬೆಳಗಿನ ಜಾವ ಮಹಾರಾಷ್ಟ್ರದ ಔರಂಗದಾಬಾದ್ ಬಳಿ ನಡೆದ ಗೂಡ್ಸ್ ರೈಲು ಡಿಕ್ಕಿ ಪ್ರಕರಣದಲ್ಲಿ ಸಾವನ್ನಪ್ಪಿದ ವಲಸಿಗರೆಲ್ಲರೂ ಮಧ್ಯಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ.ಇಂದು ನಸುಕಿನಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ ವಲಸಿಗರು ತಮ್ಮ ತವರಿಗೆ ತೆರಳಲು ಅಣಿಯಾಗಿದ್ದರು. ರೈಲು ಹಳಿಗಳ ಮೇಲೆ ಕೂತಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.ಘಟನೆ ನಡೆದಾಗ ಇವರೆಲ್ಲರೂ ರೈಲು ಹಳಿಗಳ ಮೇಲೆ ಮಲಗಿ ನಿದ್ರೆ ಹೋಗಿದ್ದರು. ಹೀಗಾಗಿ ರೈಲು ಬರುವುದನ್ನು ಗುರುತಿಸಿರಲಿಲ್ಲ. ರೈಲು ಚಾಲಕನಿಗೂ ಕೊನೆಯ ಕ್ಷಣದಲ್ಲಿ