ಶ್ರೀನಗರ: ಭಾರೀ ಮಳೆ ಹಾಗೂ ಭೂ ಕುಸಿತದ ಪರಿಣಾಮ ಪವಿತ್ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಮರನಾಥ ಯಾತ್ರೆ ನಿನ್ನೆಯಷ್ಟೇ ಆರಂಭಗೊಂಡಿತ್ತು. ಆದರೆ ಭಾರೀ ಮಳೆಯಿಂದಾಗಿ ಜಮ್ಮುವಿನ ಪಹಲ್ಗಾಮ್ ಮತ್ತು ಬಲ್ತಲ್ ಅವಳಿ ಮಾರ್ಗಗಳಲ್ಲಿ ಇಂದು ತೀವ್ರ ಭೂಕುಸಿತ ಉಂಟಾಗಿರುವುದರಿಂದ ಯಾತ್ರೆ ಸ್ಥಗಿತಗೊಂಡಿದೆ ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ(ಎಸ್ಎಎಸ್ ಬಿ) ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿಕರು ಬಲ್ತಲ್ ಮತ್ತು ನುನ್ ವಾನ್ ನಲ್ಲಿನ ಮೂಲ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಯಾತ್ರೆಯ