ನವದೆಹಲಿ: ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ರಾಜೀನಾಮೆ ನೀಡುವ ಸಾಧ್ಯತೆಯಿದೆ.ಬಿಜೆಪಿಯ ನಿಯಮದಂತೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ. ಹೀಗಾಗಿ ಕೇಂದ್ರ ಮಂತ್ರಿಯಾದ ಅಮಿತ್ ಶಾ ಅಧ್ಯಕ್ಷ ಸ್ಥಾನ ಪದತ್ಯಾಗ ಮಾಡಬೇಕಾಗಬಹುದು. ಆಗ ಬಿಜೆಪಿಯ ಚಾಣಕ್ಷ್ಯ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ ಸ್ಥಾನಕ್ಕೆ ಸಮರ್ಥ ನಾಯಕನನ್ನು ಕರೆತರುವುದು ಅನಿವಾರ್ಯ.ಹೀಗಾಗಿ ಇದೀಗ ಬಿಜೆಪಿಯ