ನವದೆಹಲಿ: 2019 ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಬಿಜೆಪಿ ಸಂಸದರು, ಶಾಸಕರಿಗೆ ಅಧ್ಯಕ್ಷ ಅಮಿತ್ ಶಾ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಸಂಸದೆ ಹೇಮಾಮಾಲಿನಿ, ಸಂಗೀತ್ ಸೋಮ್, ಸುರೇಶ್ ರಾಣಾ, ಮುರಳಿ ಮನೋಹರ್ ಜೋಶಿ, ಸಂಜೀವ್ ಬಾಲ್ಯಾನ್, ರಾಜೇಂದ್ರ ಅಗರ್ವಾಲ್ ಮುಂತಾದ ಘಟಾನುಘಟಿಗಳಿಗೆ ಮಾತಾಡುವುದು ಬಿಟ್ಟು ತಮ್ಮ ಕ್ಷೇತ್ರಗಳತ್ತ ಹೋಗಿ ಕೇಂದ್ರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ತಾಕೀತು ಮಾಡಿದ್ದಾರೆ