ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ನಡವಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹ ಹಬ್ಬಿದೆ. ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಧುರೀಣರನ್ನು ಫಾಲೋ ಮಾಡುತ್ತಿರುವ ಅಮಿತಾಬ್ ಬಚ್ಚನ್, ಕಾಂಗ್ರೆಸ್ ನಾಯಕರಿಗೆ ಟ್ವಿಟ್ ಕೂಡ ಮಾಡುತ್ತಿದ್ದು, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಹುಬ್ಬೇರುವಂತೆ ಮಾಡಿದೆ. ಅಮಿತಾಬ್ ಬಚ್ಚನ್ ಅವರು ನೆಹರು-ಗಾಂಧಿ ಕುಟುಂಬದ ಪರಮಾಪ್ತರು. ಅಲ್ಲದೇ ರಾಜೀವ್ ಗಾಂಧಿಗೆ ಆಪ್ತಮಿತ್ರರಾಗಿದ್ದರು. ಆದರೆ,