ನವದೆಹಲಿ: ಛತ್ತೀಸ್ ಘಡದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳ ಪ್ರಾಣ ತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಕ್ಸಲ್ ದಾಳಿಯಲ್ಲಿ ಸುಮಾರು 22 ಮಂದಿ ಭದ್ರತಾ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ನಕ್ಸಲರ ಈ ಹೇಯ ಕೃತ್ಯಕ್ಕೆ ತಕ್ಕ ತಿರುಗೇಟು ಕೊಡದೇ ಬಿಡಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.ನಕ್ಸಲ್ ದಾಳಿಯ ಸುದ್ದಿ ತಿಳಿದ ತಕ್ಷಣ ಚುನಾವಣಾ ಕ್ಯಾಂಪೇನ್ ರದ್ದುಗೊಳಿಸಿದ ದೆಹಲಿಗೆ ಮರಳಿದ ಅಮಿತ್ ಶಾ