ಕಾಶ್ಮೀರದಲ್ಲಿ ರಕ್ತಪಾತವಾಗುತ್ತದೆ ಎಂದಿದ್ದ ರಾಹುಲ್ ಗಾಂಧಿ ಬಗ್ಗೆ ಅಮಿತ್ ಶಾ ಲೇವಡಿ

ನವದೆಹಲಿ, ಶುಕ್ರವಾರ, 11 ಅಕ್ಟೋಬರ್ 2019 (10:06 IST)

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಾಗ ರಕ್ತಪಾತವಾಗಬಹುದು ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಗೃಹ ಸಚಿವ  ಅಮಿತ್ ಶಾ ಟೀಕಾಪ್ರಹಾರ ನಡೆಸಿದ್ದಾರೆ.


 
ಮಹಾರಾಷ್ಟ್ರದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ ಅಮಿತ್ ಶಾ ‘ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡುವ ಘೋಷಣೆ ಮಾಡಿದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಿ ರಕ್ತಪಾತವಾಗಬಹುದು ಎಂದಿದ್ದರು. ಆದರೆ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಬಳಿಕ ಅಲ್ಲಿ ರಕ್ತಪಾತ ಬಿಡಿ, ಒಂದೇ ಒಂದು ಬುಲೆಟ್ ಹಾರಲಿಲ್ಲ’ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
 
‘ಆರ್ಟಿಕಲ್ 370 ರದ್ದು ಮಾಡುವ ಪ್ರಸ್ತಾವನೆಯಿಟ್ಟಾಗ ರಾಹುಲ್ ಮತ್ತು ಎನ್ ಸಿಪಿಯ ಶರದ್ ಪವಾರ್ ವಿರೋಧ ವ್ಯಕ್ತಪಡಿಸಿದ್ದರು. ಇವರಿಬ್ಬರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಯಾಕೆ ಎಂದು ಮಹಾರಾಷ್ಟ್ರ ಜನತೆಗೆ ತಿಳಿಸಬೇಕು’ ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಯರ ರಕ್ಷಣೆಗೆ ಪಿಂಕ್ ವಾಟ್ಸಪ್ ಗ್ರುಪ್

ಯುವತಿಯರು ಹಾಗೂ ಮಹಿಳೆಯರ ನೆರವಿಗೆ ವಾಟ್ಸಪ್ ಗ್ರುಪ್ ನೆರವಿಗೆ ಬರಲಿದೆ.

news

ಕ್ಯಾಮೆರಾ ಕಂಡರೆ ಬಿಜೆಪಿ ಸರಕಾರ ನಡುಗೋದ್ಯಾಕೆ?

ಕ್ಯಾಮೆರಾ ಕಂಡರೆ ಬಿಜೆಪಿಗರಿಗೆ ಏಕೆ ನಡುಕ? ಹೀಗೊಂದು ಪ್ರಶ್ನೆ ಬಲವಾಗಿ ಕೇಳಿಬರಲಾರಂಭಿಸಿದೆ.

news

ಕೋಟೆ ನಾಡಲ್ಲಿ ತುಂಬಿದ ವಾಣಿವಿಲಾಸ ಜಲಾಶಯ

ಸತತ ಬರಗಾಲಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ಕೆರೆ ಕೋಡಿ ಬಿದ್ದಿದ್ದು, ಜನರ ...

news

ಕಾವೇರಿ ಮೇಲೆ ಸಿದ್ದರಾಮಯ್ಯ ಕಣ್ಣು

ಮುಖ್ಯಮಂತ್ರಿಯಾದವರು ಕಾವೇರಿ ನಿವಾಸಕ್ಕೆ ಬರೋದು ವಾಡಿಕೆ. ಆದರೆ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ...