ಆರೋಪಿ ಮಹಿಳೆ ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ನಂತರ ಪತಿಯನ್ನು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾರೆ. ನಂತರ ಮೃತ ವ್ಯಕ್ತಿಯ ದೇಹವನ್ನು ಸುಲಭವಾಗಿ ಹೊರಗಡೆ ಸಾಗಿಸಲು ತುಂಡು ತುಂಡಾಗಿ ಕತ್ತರಿಸಿ ಕಸದ ಗುಂಡಿಯಲ್ಲಿ ಎಸೆದ ಘಟನೆ ವರದಿಯಾಗಿದೆ. ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬೆತ್ತಲೆಗೊಳಿಸಿದ್ದಲ್ಲದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೋನಿಯ ಹೊರಭಾಗದಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎನ್ನುವ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ