ಜಯಲಲಿತಾ ಸಾವಿನ ವಿಚಾರಣೆ ಗೊಂದಲದಲ್ಲಿರುವ ಬೆನ್ನಲ್ಲೇ ಅಮೃತಾ ಎಂಬ ಯುವತಿ ನಾನೇ ಜಯಲಲಿತಾ ಪುತ್ರಿ ಎಂದು ಹೇಳಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ನಾನು ಜಯಲಲಿತಾ ಪುತ್ರಿ, ಶೋಭನ್ ಬಾಬು ನನ್ನ ತಂದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅಮೃತಾ ಹೆರಿಗೆ ಮಾಡಿಸಿದ ಲಲಿತಾ ಅವರ ಅಫಿಡವಿಟ್ ಸಹ ಸಲ್ಲಿಸಿದ್ದಾರೆ. ತಮಿಳುನಾಡಿನ ಅಧಿಕಾರಿಗಳಿಂದ ನನಗೆ ನ್ಯಾಯ ಸಿಗುವ ನಂಬಿಕೆ ಇಲ್ಲ.ಸಿಆರ್`ಪಿಸಿ 164ರಡಿ ರಹಸ್ಯ