ನೋಟು ನಿಷೇಧಗೊಳಿಸಿ ಭ್ರಷ್ಟಾಚಾರಿಗಳ ಬೆನ್ನು ಮುರಿದಿದ್ದ ಪ್ರಧಾನಿ ಮೋದಿ, ಇದೀಗ ಭ್ರಷ್ಟರ ವಿರುದ್ಧ ಮತ್ತೊಂದು ಬ್ರಹ್ಮಾಸ್ತ್ರ ಹೊರಡಿಸಲು ಸಿದ್ದರಾಗಿದ್ದಾರೆ. ಶೀಘ್ರದಲ್ಲಿಯೇ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೊಳ್ಳಲಿದ್ದು, ಬೇನಾಮಿ ಆಸ್ತಿ ಹೊಂದಿದವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. ಅನೇಕ ರಾಜಕಾರಣಿಗಳು ಭ್ರಷ್ಟಾಚಾರದಿಂದ ಖರೀದಿಸಿದ ಆಸ್ತಿಯನ್ನು ತಮ್ಮ ಕಾರು ಚಾಲಕರ ಅಥವಾ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿರುವುದು ಕಂಡು ಬಂದಿದೆ. ಒಂದು ವೇಳೆ ಬೇನಾಮಿ