ಕಳೆದ 11 ವರ್ಷ ವಯಸ್ಸಿನ ಪುತ್ರಿಯ ಮೇಲೆ ಆರು ತಿಂಗಳುಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಾರ್ಮಿಕನಾದ 45 ವರ್ಷ ವಯಸ್ಸಿನ ಪಾಪಿ ತಂದೆಯನ್ನು ಭಿವಂಡಿ ಪ್ರದೇಶದಲ್ಲಿ ಬಂಧಿಸಲಾಗಿದೆ. ಕಳೆದ ಆರು ತಿಂಗಳುಗಳಿಂದ ತಂದೆ ಅತ್ಯಾಚಾರವೆಸಗುತ್ತಿದ್ದರೂ ಸಹಿಸಿಕೊಂಡ ಪುತ್ರಿ, ಕೊನೆಗೂ ತಂದೆಯ ಲೈಂಗಿಕ ಕಿರುಕುಳ ಕಾಟ ತಾಳಲಾರದೆ ತಾಯಿಗೆ ಘೋರ ಸತ್ಯವನ್ನು ತಿಳಿಸಿದ್ದಾಳೆ. ಪುತ್ರಿ ತನ್ನ ತಾಯಿಗೆ ಅತ್ಯಾಚಾರ ವಿಷಯ ತಿಳಿಸಿದ್ದರಿಂದ ಆಘಾತಗೊಂಡ ಪಾಪಿ ತಂದೆ ಪರಾರಿಯಾಗಿದ್ದಾನೆ.