ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಾಢ್ಯ ಕೋಟೆಯಾದ ಗುಜರಾತ್ನಲ್ಲಿ ಬಿಜೆಪಿ, ಶತಾಯ ಗತಾಯ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿದೆ. ಬಿಜೆಪಿಯ ಪ್ರಬಲ ಹಿರಿಯ ನಾಯಕ ಎಂದು ಪರಿಗಣಿಸಲಾಗಿರುವ ಜೇಟಾಭಾಯ್ ಸೋಲಂಕಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಆಘಾತ ತಂದಿದೆ ಬಿಜೆಪಿ ಪಕ್ಷದಲ್ಲಿ ದಲಿತರನ್ನು ಅತ್ಯಾಚಾರಿಗಳು ಎನ್ನುವಂತೆ ನೋಡಿಕೊಳ್ಳಲಾಗುತ್ತಿದೆ. ದಲಿತರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಗೌರವವಿಲ್ಲ. ಸರ್ವಾಧಿಕಾರಿ ಧೋರಣೆ