ಲಕ್ನೋ: ದೆಹಲಿಯಿಂದ ಬರುತ್ತಿದ್ದ ಜಬಾಲ್ ಪುರ್-ಮಹಾಕೌಶಲ್ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಮಹೋಬಾ ರೈಲು ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಹಳಿ ತಪ್ಪಿದ್ದು, ಹಲವರಿಗೆ ಗಾಯಗಳಾದ ವರದಿಗಳಾಗಿವೆ. ಘಟನೆಯಲ್ಲಿ 22 ಮಂದಿಗೆ ಗಾಯಗೊಂಡಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಪರಿಹಾರ ಕಾರ್ಯಗಳ ನೇತೃತ್ವ ವಹಿಸಲು ರಾಜ್ಯ ಆರೋಗ್ಯ ಸಚಿವರ ಸಿದ್ಧಾರ್ಥ್ ನಾಥ್ ಸಿಂಗ್ ರನ್ನು ಸಿಎಂ ಯೋಗಿ ಆದಿತ್ಯನಾಥ್ ಕಳುಹಿಸಿಕೊಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ