ನವದೆಹಲಿ : ಭಾರತೀಯ ವಾಯುಸೇನೆಗೆ ಇಂದು ಅಮೆರಿಕಾದ ಅತ್ಯಾಧುನಿಕ ಹೆಲಿಕ್ಯಾಪ್ಟರ್ ಅಪಾಚಿ ಸೇರ್ಪಡೆಯಾಗುವುದರ ಮೂಲಕ ಭಾರತೀಯ ಸೇನೆಗೆ ಬಾಹುಬಲ ಬಂದಂತಾಗಿದೆ. ಅಮೆರಿಕದ ಪ್ರತಿಷ್ಠಿತ ವಿಮಾನ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿರುವ ಬಹುಮುಖಿ ಯುದ್ಧ ಕೌಶಲ್ಯ ಹೊಂದಿರುವ ಅಪಾಚಿ ಹೆಲಿಕಾಪ್ಟರ್ ಗಳು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಹಸ್ತಾಂತರ ಮಾಡಲಾಗುವುದು. ಈ ಮೂಲಕ ಅಮೇರಿಕಾ ನಿರ್ಮಾಣದ ಒಟ್ಟು 22 ಅಪಾಚೆ ಹೆಲಿಕ್ಯಾಪ್ಟರ್ ಗಳು ಭಾರತೀಯ ವಾಯುಪಡೆಗೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.