ಯುವತಿಯನ್ನು ಅಪಹರಿಸಿ ಮತಾಂತರಗೊಳಿಸಲು ಮುಂದಾದ ವ್ಯಕ್ತಿ ಅರೆಸ್ಟ್

ಬಿಜ್ನೋರ್| pavithra| Last Modified ಶುಕ್ರವಾರ, 18 ಡಿಸೆಂಬರ್ 2020 (08:33 IST)
ಬಿಜ್ನೋರ್ : ಬಿಜ್ನೋರ್ ನಲ್ಲಿ ಯುವತಿಯನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರಗೊಳ‍್ಳುವಂತೆ ಒತ್ತಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.  
ಆರೋಪಿಯನ್ನು ಸಾಕಿಬ್ ಎಂದು ಗುರುತಿಸಲಾಗಿದೆ. ಈತ ಯುವತಿಗೆ ತನ್ನ ಹೆಸರು ಸೋನು ಎಂದು ಸುಳ್ಳು ಹೇಳಿ ಅವಳ ಪರಿಚಯ ಮಾಡಿಕೊಂಡ. ಬಳಿಕ ಆಕೆಯನ್ನು ಅಪಹರಿಸಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದ. ಇತ್ತ ಯುವತಿ ಕಾಣೆಯಾದ ಬಗ್ಗೆ ಆಕೆಯ ಮನೆಯವರು ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಯುವತಿಯನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.> > ಈ ಬಗ್ಗೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :