ನವದೆಹಲಿ: ಈ ಬಾರಿ ಮುಂಗಾರು ಅಧಿವೇಶನಕ್ಕೆ ರಾಜ್ಯಸಭೆ ನಾಯಕ ಸಚಿವ ಅರುಣ್ ಜೇಟ್ಲಿ ಗೈರು ಹಾಜರಾಗಲಿದ್ದಾರೆ. ಅವರ ಬದಲಿಗೆ ರಾಜ್ಯಸಭೆ ನಾಯಕ ಸ್ಥಾನಕ್ಕೆ ಬಿಜೆಪಿ ಹೊಸ ನೇತಾರರ ಹುಡುಕಾಟದಲ್ಲಿದೆ.ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಅರುಣ್ ಜೇಟ್ಲಿಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜುಲೈ 18 ರಿಂದ ಆಗಸ್ಟ್ 10 ರವರೆಗೆ ನಡೆಯಲಿರುವ ಮುಂಗಾರು ಅಧಿವೇಶನ ತಪ್ಪಿಸಿಕೊಳ್ಳಲಿದ್ದಾರೆ.ಈಗಾಗಲೇ ಅರುಣ್ ಜೇಟ್ಲಿ ನಿಭಾಯಿಸುತ್ತಿರುವ ರಾಜ್ಯಸಭೆ ನಾಯಕ ಸ್ಥಾನವನ್ನು ಸಚಿವ ಪಿಯೂಷ್ ಗೋಯೆಲ್ ನಿಭಾಯಿಸುತ್ತಿದ್ದಾರೆ.