ದೆಹಲಿಯ ಮೂರೂ ಪಾಲಿಕೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರ್`ನಲ್ಲಿ ಅಭಿನಂದಿಸಿದ ಕೇಜ್ರಿವಾಲ್, ಇವಿಎಂ ದೋಷದ ವಿಷಯವನ್ನು ಮಾತ್ರ ಪ್ರಸ್ತಾಪಿಸಲಿಲ್ಲ. ಬಿಜೆಪಿ ಜೊತೆ ಸೇರಿ ದೆಹಲಿಯ ಏಳಿಗೆಗಾಗಿ ಕೆಲಸ ಮಾಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.