ಜೈಪುರ : ಕೊರೊನಾದಿಂದ ತಪ್ಪಿಸಿಕೊಳ್ಳಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂಬುದು ನಿಯಮ.ಆದರೆ ಜೀವ ರಕ್ಷಾಕವಚವಾದ ಅದೇ ಮಾಸ್ಕ್ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುವಂತೆ ಮಾಡಿದೆ.ಹೌದು, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸೆಪ್ಟೆಂಬರ್ 2 ರಂದು ಜೈಸಲ್ಮೇರ್ ದೇವಾಲಯಕ್ಕೆ ಭೇಟಿ ನೀಡಿದ್ದಾಗ ಹಾಸ್ಯಕರ ಘಟನೆ ನಡೆದಿದೆ. ಮುಖಕ್ಕೆ ಹಾಕಿಕೊಂಡಿದ್ದ ಮಾಸ್ಕ್ ಅನ್ನು ಕಳಚಲು ಮರೆತ ಗೆಹ್ಲೋಟ್ ಮಾಸ್ಕ್ ಹಾಕಿಕೊಂಡೇ ತೀರ್ಥ ಪ್ರಸಾದವನ್ನು