ಪ್ರತ್ಯೇಕತಾವಾದಿ ನಾಯಕಿ ಅಸಿಯಾ ಅಂದ್ರಾಬಿ ಗುರುವಾರ ಬಂಧನಕ್ಕೊಳಗಾಗಿದ್ದಾಳೆ. ದುಖ್ತರನ್ ಎ ಮಿಲ್ಲತ್ (ಪ್ರತ್ಯೇಕತಾವಾದಿ ಹುರಿಯತ್ನ ಮಹಿಳಾ ವಿಭಾಗ) ಸಂಘಟನೆಯ ನಾಯಕಿಯಾಗಿರುವ ಆಕೆಯನ್ನು ಬಸಂತ ಬಾಗ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಾಗಿನಿಂದ(ಜುಲೈ 9) ಕಾನೂನು ಜಾರಿ ಸಂಸ್ಥೆಗಳು ಆಕೆಗಾಗಿ ಶೋಧ ನಡೆಸಿದ್ದವು. ಭೂಗತವಾಗಿದ್ದುಕೊಂಡು ಮೂಲಭೂತವಾದಿ ಹೇಳಿಕೆಗಳನ್ನು ನೀಡುವುದರ ಮೂಲಕ